ರೇಷನ್ ಕಾರ್ಡ್ ತಿದ್ದುಪಡಿ: ಕರ್ನಾಟಕ ಸರ್ಕಾರದ ಪಡಿತರ ಚೀಟಿ (ration card) ತಿದ್ದುಪಡಿಗೆ ಅವಕಾಶ ನೀಡಲಾಗಿದೆ. ತಿದ್ದುಪಡಿ ಮಾಡಲು ಆಗಸ್ಟ್ 31 ಕೊನೆಯ ದಿನವಾಗಿದ್ದು, ಇಲ್ಲಿದೆ ಸಂಪೂರ್ಣ ವಿವರ.
ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ
ಕರ್ನಾಟಕ ಸರ್ಕಾರದ ಆಹಾರ ಮತ್ತು ನಾಗರಿಕ ಇಲಾಖೆಯು ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದ್ದು, ಆಗಸ್ಟ್ 1 ರಿಂದ 31 ರ ತನಕ ಪಡಿತರ ಚೀಟಿ ತಿದ್ದುಪಡಿಗೆ ಅವಕಾಶ ನೀಡಿದೆ,
ಪಡಿತರ ಚೀಟಿಯ ಅಕ್ರಮ ತಡೆಗಟ್ಟುವಲ್ಲಿ ಇಲಾಖೆಯು ಈಗ ಹೆಚ್ಚಿನ ಆದ್ಯತೆ ನೀಡಿದ್ದು, ಹೊಸ ಕಾರ್ಡ್ ಅಥವಾ ತಿದ್ದುಪಡಿಗಾಗಿ ಜನರು ಈಗ ಕಾಯುವಂತಾಗಿದೆ.

ತಿದ್ದುಪಡಿಯ ವಿವರ
ನೀವು APL/BPL ration card ಹೊಂದಿದ್ದಲ್ಲಿ ಈ ಕಾರ್ಡ್ ನಲ್ಲಿ ಈ ಕೆಳಗಿನ ಬದಲಾವಣೆ ಮಾಡಬಹುದಾಗಿದೆ.
- ಮುಖ್ಯ ಸದಸ್ಯರ ಬದಲಾವಣೆ
- ಹೊಸ ಸದಸ್ಯರ ಸೇರ್ಪಡೆ ಅಥವಾ ತೆಗೆಯಬಹುದು
- ಯಾವುದೇ ಹೆಸರು, ವಿಳಾಸ ತಿದ್ದುಪಡಿ
- ಆಧಾರ್ ಕಾರ್ಡ್ ಅಪ್ಡೇಟ್
- ಮೊಬೈಲ್ ಸಂಖ್ಯೆ ಜೋಡಣೆ
- ಯಾವುದೇ ಸದಸ್ಯರ ತಪ್ಪುಗಳ ತಿದ್ದುಪಡಿ
ರೇಷನ್ ಕಾರ್ಡ್ ತಿದ್ದುಪಡಿ ಎಲ್ಲಿ ಮಾಡಬೇಕು?
ರೇಷನ್ ಕಾರ್ಡ್ ತಿದ್ದುಪಡಿಯನ್ನು ನೀವು ನಿಮ್ಮ ಹತ್ತಿರದ ಕರ್ನಾಟಕ ಒನ್, ಗ್ರಾಮ ಒನ್ ಕಚೇರಿಗಳಲ್ಲಿ ದಾಖಲೆಗಳೊಂದಿಗೆ ತಿದ್ದುಪಡಿ ಮಾಡಿಸಬಹುದಾಗಿದೆ.
ಇನ್ನು https://ahara.karnataka.gov.in ನಲ್ಲಿ e-Service ಆಯ್ಕೆ ಮಾಡಿ, Amendment Request ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಅಲ್ಲಿ ನಿಮ್ಮ ತಿದ್ದುಪಡಿ ವಿವರ ದಾಖಲಿಸಿ, ಸೂಕ್ತ ದಾಖಲೆ upload ಮಾಡಿ, ಆಗ ನಿಮಗೆ ತಿದ್ದುಪಡಿ ಮನವಿಯ ಸಂಖ್ಯೆ ತೋರಿಸುತ್ತದೆ, ಅದನ್ನು ಇಟ್ಟುಕೊಂಡಿರಿ.
ತಿದ್ದುಪಡಿಗೆ ಬೇಕಾಗುವ ದಾಖಲೆಗಳು
- ಆಧಾರ್ ಕಾರ್ಡ್
- ಯಾವುದೇ ಸದಸ್ಯರ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್
- ನಿಮ್ಮ ವಿಳಾಸ ಬದಲಾವಣೆಗೆ ಅದರ ದಾಖಲೆ Voter ID/ Aadhaar caard/ electricity bill etc.)
- ಇನ್ನು ಹೊಸ ಹೆಸರು ಸೇರ್ಪಡೆಗೆ ಅವರ ಜಾತಿ ಆದಾಯ ಪ್ರಮಾಣಪತ್ರ
- ಮಕ್ಕಳ ಸೇರ್ಪಡೆಗೆ ಅವರ ಜನನ ಪ್ರಮಾಣ ಪತ್ರ
ಮೇಲಿನ ದಾಖಲೆಗಳೊಂದಿಗೆ ನಿಮ್ಮ ಪಡಿತರ ಚೀಟಿಯಲ್ಲಿ ತಿದ್ದುಪಡಿಗೆ ಅರ್ಜಿ ಸಲ್ಲಿಸಬಹುದಾಗಿದ್ದು, ನಿಮ್ಮ ವಿವರ ಸರಿಯಾಗಿದ್ದಲ್ಲಿ ತಿದ್ದುಪಡಿಗೆ ಅನುಮೋದನೆ ಸಿಗುತ್ತದೆ.
ತಿದ್ದುಪಡಿಗೆ ಅರ್ಜಿ ಸಲ್ಲಿಸಿ ಅದು approve ಆದ ನಂತರ ನೀವು ಹೊಸ ಕಾರ್ಡ್ ಪ್ರತಿ ಪಡೆಯಬಹುದಾಗಿದೆ.
ಸದ್ಯ ಆಗಸ್ಟ್ 31 ರವರೆಗೆ ಬೆಳಿಗ್ಗೆ 10 ರಿಂದ ಸಂಜೆ 5ರ ತನಕ ತಿದ್ದುಪಡಿಗೆ ಅವಕಾಶ ನೀಡಲಾಗಿದ್ದು ಸಾರ್ವಜನಿಕರು ಇದರ ಅವಕಾಶ ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ.
FASTag ವಾರ್ಷಿಕ ಪಾಸ್ ಆಗಸ್ಟ್ 15ರಿಂದ ಜಾರಿ, ಇಲ್ಲಿದೆ ಪಡೆಯುವ ವಿಧಾನ
ಪಿಎಂ ಕಿಸಾನ್ 20ನೇ ಕಂತಿನ ಹಣ ನಿಮ್ಮ ಖಾತೆಗೆ ಜಮೆ, ಇಲ್ಲಿದೆ ಚೆಕ್ ಮಾಡುವ ವಿಧಾನ
ಇನ್ಮುಂದೆ ಮನೆಯಲ್ಲೇ ಕುಳಿತು ಪೋಸ್ಟ್ ಮಾಡಬಹುದು, ಪೋಸ್ಟಲ್ 2.0 ಶೀಘ್ರದಲ್ಲಿ ಜಾರಿ Post from home service
ಹರೀಶ್ ಶ್ರೀಯಾನ್, ಈ ವೆಬ್ಸೈಟ್ ಮುಖ್ಯಸ್ಥ ಹಾಗೂ ಕಳೆದ 4 ವರ್ಷಗಳಿಂದ ಕನ್ನಡದ ಡಿಜಿಟಲ್ ಮಾಧ್ಯಮ ಹಾಗೂ ವೆಬ್ಸೈಟ್ ಡೆವಲಪರ್ ಆಗಿ ಕಾರ್ಯ ನಿರ್ವಹಿಸಿದ ಅನುಭವವಿದೆ.
ಕನ್ನಡದಲ್ಲಿ ಕೃಷಿ, ಸರ್ಕಾರಿ ಯೋಜನೆ, ಉದ್ಯೋಗ ಮಾಹಿತಿ ಈ ರೀತಿಯ ದೈನಂದಿನ ಉಪಯುಕ್ತ ಮಾಹಿತಿಗಳನ್ನು ಜನರಿಗೆ ನಿಖರವಾಗಿ, ಸರಳವಾಗಿ, ಸ್ಪಷ್ಟವಾಗಿ ಡಿಜಿಟಲ್ ಮಾದ್ಯಮದ ಮೂಲಕ ತಲುಪಿಸುವ ಉದ್ದೇಶ ನನ್ನದಾಗಿದೆ.
1 thought on “ರೇಷನ್ ಕಾರ್ಡ್ ತಿದ್ದುಪಡಿಗೆ ಅ.31 ತನಕ ಅವಕಾಶ, ಇಲ್ಲಿದೆ ವಿವರ”